-ಕತ್ತಲಾಗಿದೆ ಬದುಕು-

ಚಂದ್ರನಂತೆ ಈ ಬಾಳು,
ಒಮ್ಮೋಮ್ಮೆ ಮುಸುಕು,
ಮತ್ತೋಮ್ಮೆ ಬೆಳಕು,
ಮುಸುಕು ಆವರಿಸಿದೆ ಈ ಮನದೊಳಗೆ,
ಕಾಯಬೇಕು ನಾನು ಬೆಳಕು ಬರುವವರೆಗೆ...!

ಕಾಲ ಚಕ್ರದಂತೆ ಈ ಬಾಳು,
ಒಮ್ಮೆಮ್ಮೆ ಬಡತನ,
ಮತ್ತೋಮ್ಮೆ ಸಿರಿತನ,
ಬಡತನ ಎದುರಾಗಿದೆ ಈ ಗಳಿಗೆ,
ಕಾಯಬೇಕು ನಾನು ಒಳ್ಳೆ ಕಾಲ ಬರುವವರೆಗೆ...!

ಸಾಗರದ ಅಲೆಯಂತೆ ಈ ಬಾಳು,
ಹಿಂದಕ್ಕೆ ಜಾರಿದ ಮರುಕ,
ಮುಂದೆ ದಡ ಸೇರುವ ತವಕ,
ಜಾರಿದೆ ಈ ಮನವು ಸಾಗರದೆಡೆಗೆ,
ಕಾಯಬೇಕು ನಾನು ದಡ ಸೇರುವವರೆಗೆ...!

ನೋವು ನಲಿವಿನಿಂದ ಕೂಡಿದೆ ಈ ಬಾಳು,
ಒಮ್ಮೋಮ್ಮೆ ಅಳುವು,
ಮತ್ತೋಮ್ಮೆ ನಗುವು,
ಒದ್ದಾಡಿದೆ ಮನಸು ನೋವಿನ ಕಣ್ಣಿರೊಳಗೆ,
ಕಾಯಬೇಕು ನಾನು ಆನಂದ ಭಾಷ್ಪ ಬರುವವರೆಗೆ...!
---ಬಸವರಾಜ(ಹುಬ್ಳಿ)-----
By
Nanna Bhavanegala Bhavalile
love for lovers
Basavaraja(Hubli)
9066664591

Comments

Popular posts from this blog

ಚಂಚಲೆ.....(ಪ್ರೇಮ ಕವಿತೆ)